Privacy Policy

Friday, June 23, 2017

ಅಪ್ಪಾ ಐ ಲವ್ ಯೂ ಪಾ | Appa I love you pa kannada lyrics

ನಾನು ನೋಡಿದ ಮೊದಲ ವೀರ
ಬಾಳು ಕಲಿಸಿದ ಸಲಹೆಗಾರ
ಬೆರಗು ಮುಡಿಸೋ ಜಾದೂಗಾರ ಅಪ್ಪಾ
ಹಗಲು ಬೆವರಿನ ಕೂಲಿಕಾರ
ರಾತ್ರಿ ಮನೆಯಲಿ ಚೌಕಿದರ
ಎಲ್ಲ ಕೊಡಿಸುವ ಸಾಹುಕಾರ ಅಪ್ಪಾ
ಗದರೋ ಮೀಸೆಕಾರ
ಮನಸೇ ಕೋಮಲ
ನಿನ್ನ ಹೊಲೋ ಕರ್ಣ ಯಾರಿಲ್ಲ
ಅಪ್ಪಾ..... ಐ ಲವ್ ಯೂ ಪಾ      x 4
||ನಾನು ನೋಡಿದ ||

ಬೆರಳನು ಹಿಡಿದರೆ ವಿಶ್ವಾಸವು ಬೆಳೆವುದು
ಹೆಗಲಲಿ ಕುಳಿತರೆ ಕುತೂಹಲ ತಣಿವುದು
ನಾನು ಓದೋ ಪಾಠದಲಿ
ಅದು ಯಾಕೆ ನಿನ್ನ ಹೆಸರಿಲ್ಲ
ನಿನ್ನ ಹಾಗೆ ಯಾಕೆ ಯಾರಿಲ್ಲ
ನೀನು ಇರುವ ಧೈರ್ಯದಲಿ
ಯಾರೊಂದಿಗೂ ನಾ ಸೋಲಲ್ಲ
ನಿನ್ನ ಪ್ರೀತಿ ಮುಂದೆ ಏನಿಲ್ಲಾ
ಅಪ್ಪಾ..... ಐ ಲವ್ ಯೂ ಪಾ      x 4


ನಿನ್ನ ಅಂಗಿ ಬೆವರಲ್ಲಿ
ನಮ್ಮ ಅನ್ನ ಅಡಗಿದೆ
ಮಗಳೇ ಅನ್ನೋ ಮಾತಿನಲಿ
ನಿನ್ನ ಮಮತೆ ತಿಳಿದಿದೆ
ತಾಯಿ ಮಾತ್ರ ತವರಲ್ಲ 
ತಂದೆ ಇರದೆ ತಾಯಿಲ್ಲ
ಆಕಾಶದಂತೆ ನಿನ್ನ ಮನಸಪ್ಪಾ
ನಾನು ಎಂದೂ ಹೇಳಿಲ್ಲ
ಯಾಕಂತ ನಂಗೂ ತಿಳಿದಿಲ್ಲ
ನೀನು ಅಂದ್ರೆ ಅಚ್ಚು ಮೆಚ್ಚಪ್ಪಾ
ಅಪ್ಪಾ..... ಐ ಲವ್ ಯೂ ಪಾ      x 4

ಹ್ಮ್........... ಹ್ಮ್..........

ಎಲ್ಲ ಕೊಡಿಸುವ ಸಾಹುಕಾರ ಅಪ್ಪಾ

9 comments: